ಆತ ಬಂಧಿ
ಬೇಡದ ಸಂಬಂಧಗಳ ಹೊತ್ತು
ಕುರುಡು ಮೋಹದ ಬೆನ್ನಬಿದ್ದು
ಭೀತಿಯಿದೆ, ಪ್ರೀತಿಯಿಲ್ಲ
ಪರರ ನಗುವನ್ನು ಕದಿಯುತ್ತಾನೆ
ಆತ ದುಃಖಿ!!
ಸ್ವಂತಿಕೆಯೆಂಬುದೆ ಇಲ್ಲ
ಅಲುಗಾಡುತ್ತಾನೆ
ಪರದಾಡುತ್ತಾನೆ
ನಿರ್ಭೀತಿಗಾಗಿ, ಅದೇ ಪ್ರೀತಿಗಾಗಿ
ಜಗತ್ತಿನ ಜಂಜಾಟಗಳ ನಡುವೆ
ಈತನದು ಮೆರೆವ ಹಸ್ತ
ಯಾರಿಗೂ ಕೀಳಾಗಲು ಬಯಸದ ಈತ
ಸ್ವತಂತ್ರ್ಯನಲ್ಲ!!
ಎಲ್ಲರ ಬಾಯನ್ನೊರಸುವ ಭರದಲ್ಲಿ
ಅವನ ಮುಖ ಕೊಳೆತಿರುವುದೇ
ಅರೆಯದಾಗಿದೆ..
ಒಂದು, ಎರಡು, ಮೂರು
ಎಲ್ಲಿ ನಿಲ್ಲುತ್ತದೆ ಆಸೆಯ ಮಹಾಪೂರ?
ಎಣಿಸಲಾಗದಷ್ಟು ಮೆಟ್ಟಿಲುಗಳು
ಕೆಳೆಗೆ ನಿಂತವರು ಆಶ್ಚರ್ಯಗೊಂಡಿದ್ದಾರೆ
ಆ ಜಲಪಾತ ಕಂಡು
ಅವನ ಕಣ್ಣೀರಿನದ್ದೆ!!
ನಗುವು ಮರೀಚಿಕೆ
ಆತನ ಅಸ್ತಿತ್ವವು ಸಹ..
- ಅ.ರಾ.ತೇಜಸ್
No comments:
Post a Comment