Thursday, July 7, 2016

ಸೋಲಲ್ಲೆ ಜಯಸುವ ಪ್ರೇಮ ರಾಗ!!

ಅದೆಷ್ಟು ಹಾದಿಗಳ ತುಳಿದಿದ್ದೀಯೋ ನೀನು
ಬಹಳ ಗಟ್ಟಿಗಿತ್ತಿ
ನಿನ್ನ ನಡುಗೆಯಲ್ಲಿ ಯಾವುದೇ ಅಳುಕಿಲ್ಲ
ನೀ ತೊಡುವುದು ಬಹಳ ಸರಳ ಉಡುಗೆಗಳೆ
ಎಷ್ಟು ಮುದ್ದಾಗಿ ಕಾಣುತ್ತೀಯ!

ಮಾತಲ್ಲಿ ಆವೇಶವಿಲ್ಲ
ನಿನ್ನ ಕಣ್ಣಲ್ಲಿ ಕಾಣುವ ಮಿಂಚು
ನನ್ನ ಎದೆಯಲ್ಲಿ ಮೂಡುವ ಮಳೆ
ಹುಟ್ಟಿದ ಮಳೆಬಿಲ್ಲು ಸುಂದರ..
ಆನಂದಿಸುವೆ ಮಗುವಂತೆ
ಅಂಥಹ ಮಮತೆ ತುಂಬಿದೆ ನಿನ್ನಲ್ಲಿ
ಜಗತ್ತಿನ ಆಕ್ರೋಶಗಳನ್ನೆಲ್ಲ ತಣಿಸುವಷ್ಟು..

ನಿನ್ನ ಸೌಂದರ್ಯವ ಸವಿಲೆಂದೆ,
ಬಣಿಸಲೆಂದೆ
ನಾ ಹುಟ್ಟಿದೆನಾ ಎಂದೆನಿಸುತ್ತದೆ
ಅದು ಸಾಲದೇ ನನ್ನ ಜೀವದ ಸಾರ್ಥಕತೆಗೆ..
ನಾ ಮೀಟುವ ವೀಣೆ ನೀನು
ನಿನ್ನ ಸವಿಯುವ ಜೇನ್ನೊಣವು ನಾನು
ಬತ್ತದ ಉತ್ಸುಕತೆ ನಿನ್ನಲ್ಲಿ ತುಂಬಿರುವಾಗ
ತೀರದು ನಮ್ಮಿಬರಲಿ ಒಲವ ದಾಹ
ಸೋಲಲ್ಲೆ ಜಯಸುವ ಪ್ರೇಮ ರಾಗ

ಅ.ರಾ.ತೇ

Tuesday, July 5, 2016

ನೆನಪಿಸಿಬಿಡು!!

ನಿನ್ನ ತುಟಿ ಕಚ್ಚಿ
ಹೇಳಬೇಕೆಂದಿರುವೆ ಒಂದು ವಿಚಾರವ
ನಿನ್ನ ತುಂಟತನದಲ್ಲಿ ಅದನ್ನು ಮರೆಯುವ ಸಾಧ್ಯತೆ ಇದೆ
ಒಂದು ಬೆಚ್ಚಪ್ಪುಗೆಯಿಂದ ನೆನಪಿಸಿಬಿಡು!!

ಅ.ರಾ.ತೇ